‘ಬುಲೆಟ್ ಬಸ್ಯಾ ಚಿತ್ರೀಕರಣ ಪೂರ್ಣ
Posted date: 07 Thu, May 2015 – 07:48:33 AM

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಬುಲೆಟ್ ಬಸ್ಯಾ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ ‘ಬಾರೆ ಕುಂತ್‌ಕೊಳ್ಳೆ ಎಂಬ ಹಾಡಿನ ಚಿತ್ರೀಕರಣ ಥೈಲ್ಯಾಂಡ್‌ನ ಈಸ್ಟನ್ ವಿಲೇಜ್, ಡ್ರಾಗನ್ ವಿಲೇಜ್ ಹಾಗೂ ಸ್ಟ್ರಾಬೆರಿ ವಿಲೇಜ್‌ನಲ್ಲಿ ನಾಲ್ಕು ದಿನಗಳ ಕಾಲ ನಡೆದಿದೆ. ಶರಣ್ ಹಾಗೂ ಹರಿಪ್ರಿಯ ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ.
     ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಸುಜ಼್ಞಾನ್ ಅವರ ಛಾಯಾಗ್ರಹಣವಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹರ್ಷ, ಮುರಳಿ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶರಣ್, ಹರಿಪ್ರಿಯ, ಗಿರಿ ಗೋಧುಳಿ, ಪ್ರಶಾಂತ್ ಸಿದ್ದಿ, ಸಾಧುಕೋಕಿಲ, ರಮೇಶ್‌ಭಟ್, ಗಿರಿಜಾ ಲೋಕೇಶ್, ಯತಿರಾಜ್ ಜಗ್ಗೇಶ್, ಮುನಿ, ನೀನಾಸಂ ಅಸ್ವತ್, ತನ್ವೀರ್  ಮುಂತಾದವರಿದ್ದಾರೆ.   

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed